ಹಿಂದೆ ಈ ನಮ್ಮ ಮೈಸೂರು ರಾಜ್ಯವನ್ನು ರಾಜವೊಡೆಯರು ಆಳುತ್ತಿದ್ದರು. ಆಗ ವೀರಾಜಯ್ಯನೆಂಬುವವನು ಒಬ್ಬನು ಇದ್ದನು. ಮಹಾರಾಜರು ಅವನು ಬದುಕಲೆಂದು ಕಾರುಗಳ್ಳಿಯನ್ನು ಅವನಿಗೆ ಮಾನ್ಯವಾಗಿ ಕೊಟ್ಟಿದ್ದರು. ವೀರಾಜಯ್ಯನು ಬಹಳ ಜಂಭಗಾರನು. ಯಾರನ್ನು ಕಂಡರೂ ಲಕ್ಷ್ಯವಿರಲಿಲ್ಲ. ಒಂದು...
ಮಬ್ಬುಗವಿದು ಕತ್ತಲಾಗೆ ಎತ್ತ ಏನು ಕಾಣದಾಗೆ ಮಳೆಯ ಹನಿಯು ಮೊತ್ತವಾಗಿ ಬಂದು ಮೊಗವ ತಿವಿಯುತಿರಲು ಸತ್ತು ಬಿದ್ದ ಬಂಟನಂತೆ ಇಳೆಯು ಸುಮ್ಮನೊರಗುತಿರಲು ಕತ್ತನೆತ್ತಿ ಅತ್ತ ಇತ್ತ ನೋಡುತಿಹುದು ಗುಬ್ಬಿ ಎತ್ತ ತನ್ನ ಪಯಣ ಬೆಳೆಸಿತೋ!...
ಮೈಸೂರು ಮಲ್ಲಿಗೆ (೧೯೪೨) ಬಂದಿದ್ದು ಈಗ್ಗೆ ಏಳು ದಶಕಗಳ ಹಿಂದೆ. ಓದುಗರಲ್ಲಿ ಅದು ಆಗ ಹುಟ್ಟಿಸಿದ ಮಧುರ ಭಾವ ಇನ್ನೂ ಹಳತಾಗಿಲ್ಲ. ಕಾಲ ಸಂದಂತೆ ಮೈಸೂರ ಮಲ್ಲಿಗೆ ಕನ್ನಡದ ಒಂದು ಪ್ರಾತಿನಿಧಿಕ ಸಂಕಲನವಾಗಿದೆ. ನಾಡಿಗರು...
ತಾಯಿ ಹೇಳುತಲಿದ್ದಳೆನ್ನ ಬಾಲ್ಯದ ಕತೆಯ :- ಮಂಜಾವದಿಂದ ಮುಂಗಾಳು ಕವಿಯುವ ವರೆಗೆ ಓರಿಗೆಯ ಹಸುಳರೊಡನಾಡಿ, ಬಿಸಿಲಿನ ಬೇಗೆ ಬೆಳದಿಂಗಳೆನೆ ಕಳೆಯುತಿದ್ದೆ. ಹಸಿವೆಯ ವ್ಯಥೆಯ ನಾನು ಅರಿತಿರಲಿಲ್ಲ. ಆಟನೋಟಕೆ ಹೀಗೆ ಮೆಚ್ಚಿಯೂಟವ ಮರೆಯೆ, ಕಿರುಮನೆಯ ಕತ್ತಲೆಯ-...
ಆಕೆ ಫಣಿಯಮ್ಮ. ಮನೆಗೆಲಸ ಮಾಡಿ ಬದುಕ ನಡೆಸುತ್ತ ಏಗುತ್ತಿರುವ ಮಧ್ಯವಯಸ್ಸಿನ ಹೆಂಗಸು. ನಾಲ್ಕು ಮಕ್ಕಳ ತಾಯಿ. ಮಕ್ಕಳೆಲ್ಲಾ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಗಂಡ ಕೂಡಾ ಒಬ್ಬ ಕೂಲಿ. ಆದರೆ ವಿಪರೀತ ಕುಡುಕ. ದುಡಿದ ಹಣದಲ್ಲಿ...
ಜೀನ್ ವಾಲ್ಜೀನನು ತನ್ನ ಊರಿಗೆ ಬಂದಕೂಡಲೇ ನೆಟ್ಟನೆ ಫಾಂಟೈನಳು ಮರಣಾವಸ್ಥೆಯಲ್ಲಿ ಮಲಗಿದ್ದ ಕೊಠಡಿಗೆ ಹೋದನು. ಜೇವರ್ಟನೂ ಹಿಂಬಾಲಿಸಿ ಬಂದಿದ್ದನು ; ಅವನನ್ನು ದಸ್ತಗಿರಿ ಮಾಡಿ ದನು, ಜೀನ್ ವಾಲ್ಜೀನನು, ತಾನು ಕೋಸೆಟ್ಟಳನ್ನು ಕರೆತರು ವುದಕ್ಕಾಗಿ...